Saturday, December 14, 2024
Homeರಾಜ್ಯಬೆಂಗಳೂರು ವಿಭಾಗಶ್ರೀಗಂಧದ ಮರ ಕಳ್ಳತನ

ಶ್ರೀಗಂಧದ ಮರ ಕಳ್ಳತನ

ಮಾಗಡಿ: ತಾಲ್ಲೂಕಿನ ಕುದೂರು ಹೋಬಳಿಯ ಕಾಜೀಪಾಳ್ಯದ ರೈತ ಭೈರಪ್ಪ ಅವರ ತೋಟದಲ್ಲಿ 19 ಶ್ರೀಗಂಧದ ಮರಗಳನ್ನು ಗುರುವಾರ ರಾತ್ರಿ ಕಳ್ಳರು ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ..

ಭೈರಪ್ಪ ಅವರು ಆರು ಎಕರೆ ಭೂಮಿಯಲ್ಲಿ ಮರಗಳನ್ನು ಬೆಳೆಸಿದ್ದಾರೆ. ಕಳ್ಳರ ಮೇಲೆ ನಿಗಾ ಇಡಲು ತೋಟದಲ್ಲಿ ಸಿಸಿಟಿವಿ ಕ್ಯಾಮೆರಾ ಕೂಡ ಅಳವಡಿಸಿದ್ದರು. ಆದರೆ, ಕಳ್ಳರು ಕ್ಯಾಮೆರಾಗಳನ್ನು ಮೇಲಕ್ಕೆ ತಿರುಗಿಸಿ ಕೃತ್ಯ ಎಸಗಿದ್ದಾರೆ. ಅಂದಾಜು ₹20 ಲಕ್ಷ ಮೌಲ್ಯದ ಮರಗಳನ್ನು ಕದ್ದೊಯ್ದಿದ್ದಾರೆ.

ಘಟನೆ ಕುರಿತು ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.