ಬೆಂಗಳೂರು: ಕೆಪಿಟಿಸಿಎಲ್ ಮತ್ತು ಎಲ್ಲಾ ಎಸ್ಕಾಂ ಉಪ ಕೇಂದ್ರಗಳ ಬಳಿ ಸೋಲಾರ್ ಪಾರ್ಕ್‌ಗಳ ಸ್ಥಾಪನೆ ಮಾಡಬೇಕು ಎಂದು ಇಂಧನ ಸಚಿವರಾದ ಕೆ.ಜೆ.ಜಾರ್ಜ್ ಸೂಚಿಸಿದರು. ಬೆಂಗಳೂರಿನ ಬೆಸ್ಕಾಂ ಕಾರ್ಪೊರೇಟ ಕಚೇರಿಯಲ್ಲಿ ವಿವಿಧ ಅಧಿಕಾರಿಗಳ ಸಭೆಯನ್ನು ಅವರು ನಡೆಸಿದರು. ಐಪಿ ಫೀಡರ್ ಸೋಲಾರೈಸೇಶನ್ ಕೂಡ ಮಾಡಬೇಕು ಎಂದರು. ಈ ಯೋಜನೆಗಳ ಅನುಷ್ಠಾನವು ಸ್ಥಳೀಯ ವಿದ್ಯುತ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಹಗಲಿನಲ್ಲಿ ರೈತರಿಗೆ ಇರುವ ವಿದ್ಯುತ್ ಅಗತ್ಯಗಳನ್ನು ಸಮರ್ಥವಾಗಿ ಪೂರೈಸುತ್ತದೆ ಎಂದು ತಿಳಿಸಿದರು. ನಂತರ ಸಚಿವರು ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಭೂಗತ ಕೇಬಲ್‌ಗಳ ಅಳವಡಿಕೆಯನ್ನು ಪರಿಶೀಲಿಸಿ ಚರ್ಚಿಸಲು ಮತ್ತೊಂದು ಸಭೆ ನಡೆಸಿದರು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಾದ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ, ಕೆಆರ್‌ಇಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕರಾದ ರುದ್ರಪ್ಪಯ್ಯ, ತಾಂತ್ರಿಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು.