Saturday, December 14, 2024
Homeರಾಜ್ಯಬೆಂಗಳೂರು ವಿಭಾಗಸೌಜನ್ಯಳ ಕೇಸ್ ಮರು ತನಿಖೆಗೆ ಸರ್ಕಾರ ಒಪ್ಪದಿದ್ದರೆ ದೆಹಲಿ ಚಲೋ ಪ್ರತಿಭಟನೆ

ಸೌಜನ್ಯಳ ಕೇಸ್ ಮರು ತನಿಖೆಗೆ ಸರ್ಕಾರ ಒಪ್ಪದಿದ್ದರೆ ದೆಹಲಿ ಚಲೋ ಪ್ರತಿಭಟನೆ

ಪೀಣ್ಯ ದಾಸರಹಳ್ಳಿ‌:’ಸೌಜನ್ಯಳ ಮೇಲೆ ಅತ್ಯಾಚಾರ ಹಾಗೂ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಿ ಅಪರಾಧಿಗಳಿಗೆ ಶಿಕ್ಷೆ ಅಗಲೇಬೇಕು ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡು ಮರು ತನಿಖೆ ನೆಡಸಬೇಕು ಇಲ್ಲದಿದ್ದರೆ ದೆಹಲಿ ಚಲೋ ಹಮ್ಮಿಕೊಳ್ಳಲಾಗುವುದು’ ಎಂದು ತ್ರಿಶೂಲ್ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ರಾಜು ಸರ್ಕಾರಕ್ಕೆ ಅಗ್ರಹಿಸಿದರು. ಸೌಜನ್ಯಳಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಳೆದ ಆ.25 ರಿಂದ 28 ರವರೆಗೆ ಉಜಿರೆಯ ಅವರ ಮನೆಯಿಂದ ಧರ್ಮಸ್ಥಳದ ಬೀದಿ ಬೀದಿಗಳಲ್ಲಿ ಜನಜಾಗೃತಿ ಮೂಡಿಸುವ ಮೂಲಕ ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಬೆಳ್ಳೂರ್ ಕ್ರಾಸ್, ಕುಣಿಗಲ್ ಮಾರ್ಗವಾಗಿ ಬೆಂಗಳೂರಿನ ವಿಧಾನಸೌಧದವರೆಗೆ ತ್ರಿಶೂಲ್ ಸೇನೆ ಬೃಹತ್ ಪಾದಯಾತ್ರೆ ಮೂಲಕ ಜನಜಾಗೃತಿ ಹಮ್ಮಿಕೊಂಡಿತ್ತು. ಬೆಂಗಳೂರಿನ ಹೆಬ್ಬಾಗಿಲು ನಾಗಸಂದ್ರದ ಮೆಟ್ರ ನಿಲ್ದಾಣ ಬಳಿ ತಲುಪಿ ಮಾಧ್ಯಮಗಳೊಂದಿಗೆ ಮಾತಾನಾಡಿದರು. ‘ಸೌಜನ್ಯಳ ಕೇಸ್ ಜೊತೆಗೆ ಸಮಾಜದಲ್ಲಿ ನೆಡೆಯುತ್ತಿರುವ ಹೆಣ್ಣಿನ ಶೋಷಣೆ, ಜೂಜು ,ಇಸ್ಪೀಟ್, ಮೀಟರ್ ಬಡ್ಡಿ ಹಾಗೂ ಎಲ್ಲಾತರಹದ ಶೋಷಣೆ ನಿಲ್ಲಬೇಕು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿ ಗಳಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗುವುದು’ ಎಂದರು. ‘ಸೌಜನ್ಯಳ ವಿಚಾರದಿಂದ ತ್ರಿಶೂಲ್ ಸೇನೆ ಒಂದು ಕ್ರಾಂತಿ ಮಾಡಲು ಶುರುಮಡದೆ.ನಮ್ಮ ದೇಶದಲ್ಲಿ ಕ್ರಾಂತಿಯ ಅವಶ್ಯಕತೆ ಇದೆ. ಸಮಾಜದಲ್ಲಿ ನೆಡೆಯುತ್ತಿರುವ ದೌರ್ಜನ್ಯ ನಿಲ್ಲಬೇಕಾದರೆ ಜನರು ಜೊತೆಯಾಗಿ ನಿಂತರೆ ಸೌಜನ್ಯಳಿಗೆ ನ್ಯಾಯ ದೊರಕಿಸಲು ಸಾಧ್ಯ, ತ್ರಿಶೂಲ್ ಸೇನೆ ವತಿಯಿಂದ ಸೌಜನ್ಯಳ ತಾಯಿ ಸೇರಿದಂತೆ ಕರ್ನಾಟಕದ ಜನರ ಪರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದೆವೆ’ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಅಭಯ ಶೀಲಾ ,ಅಭಯಕೃಷ್ಣಯ್ಯ,ರೇಖಾ ಶಿವಪಟೇಲ್ ಸಂಘಟನೆಯ ಪಧಾದಿಕಾರಿಗಳು ಭಾಗವಹಿಸಿದ್ದರು.