Monday, May 19, 2025
Homeರಾಜ್ಯಕರಾವಳಿ ಕರ್ನಾಟಕಸುಳ್ಯದಲ್ಲಿ ದಂಪತಿ ಆತ್ಮಹತ್ಯೆ: ಪತ್ತೆಯಾಗದ ಕಾರಣ

ಸುಳ್ಯದಲ್ಲಿ ದಂಪತಿ ಆತ್ಮಹತ್ಯೆ: ಪತ್ತೆಯಾಗದ ಕಾರಣ

ಸುಳ್ಯದಲ್ಲಿ ದಂಪತಿ ಆತ್ಮಹತ್ಯೆ

ಮಂಗಳೂರು: ಸುಳ್ಯ ತಾಲ್ಲೂಕಿನ ಎಲಿಮಲೆಯಲ್ಲಿ ರಬ್ಬರ್ ಟ್ಯಾಪಿಂಗ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ದಂಪತಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ರಾಜನ್ ಹಾಗೂ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡವರು. ತಮಿಳುನಾಡಿನವರಾದ ಅವರು ಎಲಿಮಲೆಯಲ್ಲಿ ಹಲವು ವರ್ಷಗಳಿಂದ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದರು. ಇತ್ತೀಚೆಗೆ ರಬ್ಬರ್ ತೋಟವನ್ನು ಖರೀದಿಸಿದ್ದರು‌. ಟ್ಯಾಪಿಂಗ್ ಮಾಡಿಕೊಂಡು ಮೂವರು ಮಕ್ಕಳೊಂದಗೆ ವಾಸಿಸುತ್ತಿದ್ದರು. ರಾಜನ್ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಮಂಗಳವಾರ ಮನೆಯಲ್ಲಿ ದಂಪತಿ ಮಾತ್ರ ಇದ್ದರು. ಈ ಸಮಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.