ಬೆಂಗಳೂರು : ವಿದ್ಯುನ್ಮಾನ ಮತಯಂತ್ರ (ಇವಿಎಂ) ಕುರಿತು ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿರುದ್ಧ ಸುಪ್ರೀಂ ಕೋರ್ಟ್ ನಿಂದ ತೀವ್ರ ವಾಗ್ದಾಳಿ “ಅರ್ಜಿದಾರರು ಅತಿಯಾದ ಅನುಮಾನಕ್ಕೆ ಒಳಗಾಗುತ್ತಿದ್ದಾರೆ” ಎಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಖನ್ನಾ.
“ಪ್ರತಿ 6 ರಿಂದ 8 ತಿಂಗಳಲ್ಲಿ ಹೊಸದಾಗಿ ಇವಿಎಂ ವಿಚಾರ ಪ್ರಸ್ತಾಪವಾಗುತ್ತಿದೆ. ಚುನಾವಣಾ ಆಯೋಗ ಇದಕ್ಕೆ ಪ್ರತಿಯಾಗಿ ಸಲ್ಲಿಸಿರುವ ಪ್ರಮಾಣಪತ್ರ ಅತ್ಯಂತ ವಿಸ್ತೃತವಾಗಿದೆ. ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಯಾವುದೇ ತುರ್ತು ಇಲ್ಲ” : ಗೌರವಾನ್ವಿತ ಸುಪ್ರೀಂ ಕೋರ್ಟ್.
ಈ ಹಿಂದೆ ನ್ಯಾಯಾಲಯಗಳು ಇದನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಿಂತ ಹೆಚ್ಚಾಗಿ “ಪ್ರಚಾರ ಹಿತಾಸಕ್ತಿ ಮೊಕದ್ದಮೆ” ಎಂದು ಕರೆದಿವೆ.
ಇತ್ತೀಚೆಗೆ ದೆಹಲಿ ಹೈಕೋರ್ಟ್ ದೃಢವಾದ ಮತ್ತು ಪಾರದರ್ಶಕ ಎಫ್.ಎಲ್.ಸಿ ಪ್ರಕ್ರಿಯೆ ಕುರಿತು ವಿಶ್ವಾಸ ವ್ಯಕ್ತಪಡಿಸುವಾಗ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅರ್ಜಿಯನ್ನು ವಜಾಗೊಳಿಸಿತ್ತು.
ಇವಿಎಂ ಗಳ ನ್ಯಾಯಸಮ್ಮತೆಯನ್ನು ಜನ ಪದೇ ಪದೇ ಏಕೆ ಪ್ರಶ್ನಿಸುತ್ತಾರೆ ಎಂದು ಸುಪ್ರೀಂ ಕೋರ್ಟ್ ಪ್ರಶ್ನೆ
ಚುನಾವಣೆ ಬಂದ ಕೂಡಲೇ ಇವಿಎಂಗಳು ಅಳಲು ಪ್ರಾರಂಭಿಸುತ್ತವೆ; ಸುಪ್ರೀಂ ಕೋರ್ಟ್ ಛೀಮಾರಿ
100% ವಿವಿಪ್ಯಾಟ್ ಪರಿಶೀಲನೆಯ ಕಲ್ಪನೆಯು “ಅವಮಾನಕರ” ಇದು ಕಾಗದದ ಮತಪತ್ರ ವ್ಯವಸ್ಥೆಗೆ ಬದಲಾಗುವುದನ್ನು ಹೋಲುತ್ತದೆ: ಚುನಾವಣಾ ಆಯೋಗ.
ವಿವಿಪ್ಯಾಟ್ ಚೀಟಿಗಳನ್ನು ಎಣಿಕೆ ಮಾಡುವುದು ಕಾಗದದ ಮತಪತ್ರಕ್ಕಿಂತ ಕೆಟ್ಟದ್ದು ಮತ್ತು ಇದು ಫಲಿತಾಂಶ ತಿರುಚುವಿಕೆಗೆ ಕಾರಣವಾಗುತ್ತದೆ ; ಪ್ರಮಾಣಪತ್ರದ ಮಾಹಿತಿ
ಇವಿಎಂಗಳ ಬಳಕೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀವ್ರ ವಾಗ್ದಾಳಿ ನಡೆಸಿದೆ. ತನ್ನ ಸರಣಿ ಅವಲೋಕನಗಳಲ್ಲಿ ನ್ಯಾಯಾಲಯ ಈ ವಿಷಯವನ್ನು ಆಗಾಗ್ಗೆ ಪ್ರಸ್ತಾಪಿಸುವ ಅಗತ್ಯವನ್ನು ಪ್ರಶ್ನಿಸಿದೆ.
ಅಸೋಷಿಯೇಷನ್ ಫಾರ್ ಡೆಮೋಕ್ರೇಟಿಕ್ ರಿಫಾಮ್ರ್ಸ್ ಮತ್ತು ಭಾರತೀಯ ಚುನಾವಣಾ ಆಯೋಗದ [ಡಬ್ಲ್ಯೂಪಿಸಿ ಸಂಖ್ಯೆ 434/2023] ನಡುವೆ ಇವಿಎಂ/ವಿವಿಪ್ಯಾಟ್ ಗಳ ಕುರಿತ ಪ್ರಕರಣದಲ್ಲಿ ಚುನಾವಣಾ ಆಯೋಗ ವಿಸ್ತೃತ ಪ್ರಮಾಣ ಪತ್ರ ಸಲ್ಲಿಸಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಪ್ರಾರಂಭದಲ್ಲೇ ಪದೇ ಪದೇ ಇವಿಎಂ ವಿಚಾರವನ್ನು ಎತ್ತಲಾಗುತ್ತಿದೆ ಎಂದು ದಾಖಲಿಸಿದರು ಮತ್ತು ಅರ್ಜಿದಾರರ ಪರ ವಕಾಲತ್ತು ವಹಿಸಿರುವ ಶ್ರೀ ಪ್ರಶಾಂತ್ ಭೂಷಣ್ ಅವರೇ “ಅರ್ಜಿದಾರರು ಅತಿಯಾದ ಅನುಮಾನಕ್ಕೆ ಒಳಗಾಗುತ್ತಿದ್ದಾರೆ”. ಪ್ರತಿವರ್ಷ ಇಂತಹ ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ. ಚುನಾವಣಾ ಆಯೋಗ ಇದಕ್ಕೆ ಪ್ರತಿಯಾಗಿ ಸಲ್ಲಿಸಿರುವ ಪ್ರಮಾಣಪತ್ರ ಅತ್ಯಂತ ವಿವರವಾಗಿದೆ. ಎಷ್ಟು ಬಾರಿ ಈ ವಿಚಾರವನ್ನು ಪ್ರಸ್ತಾಪಿಸುತ್ತೀರಿ. ಪ್ರತಿ 6 ರಿಂದ 8 ತಿಂಗಳಲ್ಲಿ ಹೊಸದಾಗಿ ಇವಿಎಂ ವಿಚಾರ ಪ್ರಸ್ತಾಪವಾಗುತ್ತಿದೆ. ಈ ವಿಚಾರವನ್ನು ಹೊಸದಾಗಿ ಎತ್ತಲಾಗಿದೆ.”
ಭಾರತೀಯ ಚುನಾವಣಾ ಆಯೋಗ ಅರ್ಜಿಗೆ ಪ್ರತಿಯಾಗಿ ಸಲ್ಲಿಸಿರುವ ಪ್ರಮಾಣಪತ್ರವನ್ನು ನ್ಯಾಯಮೂರ್ತಿ ಖನ್ನಾ ಅವರು ಪ್ರಸ್ತಾಪಿಸಿದರು ಮತ್ತು ಪ್ರಮಾಣ ಪತ್ರವನ್ನು ಪರಿಶೀಲಿಸಿದ ನಂತರ ಅರ್ಜಿಯನ್ನು ತುರ್ತಾಗಿ ಕೈಗೆತ್ತಿಕೊಳ್ಳುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು. ಶ್ರೀ ಪ್ರಶಾಂತ್ ಭೂಷಣ್ ಅವರು ಚುನಾವಣಾ ಆಯೋಗ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸರಿಯಾದ ಮಾಹಿತಿಯನ್ನು ಒದಗಿಸಿರುವುದಿಲ್ಲ ಮತ್ತು ಸದರಿ ಪಿಐಎಲ್ ನ್ನು ಎರಡು ವಾರಗಳ ನಂತರ ಪಟ್ಟಿ ಮಾಡಬೇಕೆಂದು ಕೋರಿದರು, ಇದಕ್ಕೆ ಪ್ರತಿಯಾಗಿ ನ್ಯಾಯಮೂರ್ತಿ ಖನ್ನಾ ಅವರು ಚುನಾವಣಾ ಆಯೋಗ ಸಲ್ಲಿಸಿರುವ ಪ್ರಮಾಣಪತ್ರ ವಿವರವಾಗಿದೆ ಎಂದು ಗಮನಿಸಿದ ನಂತರ ಅದನ್ನು ನಿರಾಕರಿಸಲಾಯಿತು. ಅರ್ಜಿದಾರರಿಗೆ ಸ್ಪಷ್ಟೀಕರಣ ಸಲ್ಲಿಸಲು ಒಂದು ವಾರಗಳ ಕಾಲಾವಕಾಶ ನೀಡಲಾಗಿದೆ ಮತ್ತು ಪ್ರಕರಣವನ್ನು ನವೆಂಬರ್ ನಲ್ಲಿ ಕೈಗೆತ್ತಿಕೊಳ್ಳುವುದಾಗಿ ತಿಳಿಸಿದರು.
ಈ ಹಿಂದೆ ನ್ಯಾಯಾಲಯಗಳು ಇವಿಎಂ ಸಮಗ್ರತೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿ ಸಲ್ಲಿಸಿರುವ ಅರ್ಜಿಗಳ ಬಗ್ಗೆ, ಇದನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಿಂತ [ಪಿಐಎಲ್ ಗಳು] ಹೆಚ್ಚಾಗಿ “ಪ್ರಚಾರ ಹಿತಾಸಕ್ತಿ ಮೊಕದ್ದಮೆ” ಎಂದು ಕರೆದಿವೆ.
ಇತ್ತೀಚೆಗೆ ದೆಹಲಿ ಹೈಕೋರ್ಟ್ ದೃಢವಾದ ಮತ್ತು ಪಾರದರ್ಶಕ ಎಫ್.ಎಲ್.ಸಿ ಪ್ರಕ್ರಿಯೆ ಕುರಿತು ವಿಶ್ವಾಸ ವ್ಯಕ್ತಪಡಿಸುವಾಗ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಅರ್ಜಿಯನ್ನು ವಜಾಗೊಳಿಸಿತ್ತು. 2024 ರ ಲೋಕಸಭಾ ಚುನಾವಣೆಗೆ ದೆಹಲಿಯ ಎನ್.ಸಿ.ಆರ್ ನಲ್ಲಿ ಇವಿಎಂಗಳು ಮತ್ತು ವಿವಿಪ್ಯಾಟ್ ಗಳ ಎಫ್.ಎಲ್.ಸಿಯನ್ನು ರದ್ದುಗೊಳಿಸಲು ಮತ್ತು ಹೊಸದಾಗಿ ಪ್ರಾರಂಭಿಸಲು ಕೋರಲಾಗಿತ್ತು. ಡಿಪಿಸಿಸಿ ಬಗ್ಗೆ ನ್ಯಾಯಾಲಯ ಅಸಮದಾನ ವ್ಯಕ್ತಪಡಿಸಿತ್ತು. ಡಿಪಿಸಿಸಿ ಯು “ಎಫ್.ಎಲ್.ಸಿ ಪ್ರಕ್ರಿಯೆಯಿಂದ ದೂರ ಉಳಿದು ನಂತರ ಇದೇ ಪ್ರಕ್ರಿಯೆಯ ಸಮಗ್ರತೆ ಕುರಿತು ಪ್ರಶ್ನಿಸುತ್ತಿರುವುದು ಅರ್ಜಿದಾರರ ಬಗ್ಗೆ ಉತ್ತಮವಾದ ಅಭಿಪ್ರಾಯ ಮೂಡುವುದಿಲ್ಲ”.
ಭಾರತ ಚುನಾವಣಾ ಆಯೋಗ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆಯೋಗ ಹಾಲಿ ಅರ್ಜಿಯಲ್ಲಿ ಇವಿಎಂಗಳು/ವಿವಿಪ್ಯಾಟ್ ಗಳ ಕಾರ್ಯನಿರ್ವಹಣೆ ಕುರಿತು ಸಂದೇಹ ವ್ಯಕ್ತಪಡಿಸಿರುವುದು ಮತ್ತೊಂದು ಪ್ರಯತ್ನವಾಗಿದ್ದು, ಈ ಸಂಬಂಧ ಯಾವುದೇ ಆಧಾರ ಮತ್ತು ಪುರಾವೆಗಳನ್ನು ಒದಗಿಸಿರುವುದಿಲ್ಲ, 2024 ರ ಲೋಕಸಭಾ ಚುನಾವಣೆಗೂ ಮುನ್ನ ಇದೇ ರೀತಿಯ ಅರ್ಜಿಗಳನ್ನು ನಿರೀಕ್ಷಿಸಲಾಗಿದೆ. ಪ್ರತಿ ಹಂತದ ಚುನಾವಣೆಗೂ ಮುನ್ನ ಇಂತಹ ಪ್ರಕರಣಗಳನ್ನು ಆಯೋಗ ಗಮನಿಸುತ್ತಿದೆ. ಇವಿಎಂಗಳ ಸುತ್ತ ನಕಲಿ ನಿರೂಪಣೆಯನ್ನು ಸೃಷ್ಟಿಸುವ ಮತ್ತು ಮತದಾರರ ಮನಸ್ಸಿನಲ್ಲಿ ಅನುಮಾನ ಸೃಷ್ಟಿಸಲು, ಇವಿಎಂಗಳ ಸಮಗ್ರತೆ ಕುರಿತು ಅನುಮಾನ ಸೃಷ್ಟಿಸಿರುವ ದುರುದ್ದೇಶವನ್ನು ಇದು ಒಳಗೊಂಡಿದೆ.
ಚುನಾವಣಾ ಫಲಿತಾಂಶಗಳಲ್ಲಿ ಜನರ ಇಚ್ಚೆಯನ್ನು ನಿμÉ್ಠಯಿಂದ ಜನರಿಗೆ ವಿವರಿಸುವುದು ಯಾವುದೇ ಚುನಾವಣಾ ವ್ಯವಸ್ಥೆಯ ನೈಜ ಪರೀಕ್ಷೆಯಾಗಿದೆ ಎಂದು ಆಯೋಗ ತನ್ನ ಪ್ರಮಾಣ ಪತ್ರದ ಮೂಲಕ ಈ ವಿಷಯವನ್ನು ಸಾಕಾರಗೊಳಿಸಿದೆ. ಇದಲ್ಲದೇ ಇವಿಎಂಗಳು ವರ್ಷಗಳಿಂದ ಜನರ ಜನಾದೇಶವನ್ನು ನ್ಯಾಯಯುತವಾಗಿ ಪ್ರತಿಬಿಂಬಿಸುತ್ತಿವೆ. ಸಂವಿಧಾನಿಕ ನ್ಯಾಯಾಲಯಗಳು [ಗೌರವಾನ್ವಿತ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಗಳಲ್ಲಿ ಇಂತಹ 25 ಪ್ರಕರಣಗಳು ದಾಖಲಾಗಿವೆ]. ಭಾರತೀಯ ಚುನಾವಣೆಗಳ ಸಮಗ್ರತೆಯನ್ನು ಇವಿಎಂಗಳು ಸದಾ ಕಾಲ ಎತ್ತಿ ಹಿಡಿದಿವೆ. ಚುನಾವಣಾ ವ್ಯವಸ್ಥೆಯಲ್ಲಿ ಇವಿಎಂಗಳನ್ನು ಪರಿಚಯಿಸಿದ [2004 ರ ನಂತರ] ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಪಡೆಯುವ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ 44 ಬಾರಿ ಮತ್ತು ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಬದಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಎಐಟಿಸಿ ಸತತ ಮೂರು ಬಾರಿ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಎರಡು ಬಾರಿ ಇವಿಎಂಗಳ ಮೂಲಕ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಇತ್ತೀಚೆಗೆ ಪಂಜಾಬ್ ನಲ್ಲಿ ಇವಿಎಂ ಮೂಲಕ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಗೆದ್ದಿದೆ. ಕೇರಳದಲ್ಲಿ ಸಿಪಿಐ[ಎಂ] ನಾಲ್ಕು ಬಾರಿ ಗೆದ್ದಿದೆ. ಎಲ್ಲಾ ರಾಜಕೀಯ ಪಕ್ಷಗಳು ಜನರ ಜನಾದೇಶದ ಮೂಲಕವೇ ಗೆದ್ದಿವೆ.
ಇವಿಎಂಗಳಲ್ಲಿ ಚಲಾವಣೆಯಾದ ಮತಗಳೊಂದಿಗೆ ವಿವಿಪ್ಯಾಟ್ ಚೀಟಿಗಳನ್ನು 100% ರಷ್ಟು ಪರಿಶೀಲಿಸುವಂತೆ ಅರ್ಜಿದಾರರು ವಿನಂತಿಸಿದ್ದರು. ಮತದಾರ ತನ್ನ ಮತವನ್ನು ದಾಖಲಿಸಿದಂತೆ ಎಣಿಸಲಾಗಿದೆ ಎಂದು ಪರಿಶೀಲಿಸಲು ಯಾವುದೇ ಕಾರ್ಯವಿಧಾನವಿಲ್ಲದ ಕಾರಣ ಕಾನೂನಿನಲ್ಲಿನ ನಿರ್ವಾತವನ್ನು ಸಹ ಉಲ್ಲೇಖಿಸಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಚುನಾವಣಾ ಆಯೋಗ ಈ ಸಲಹೆಯನ್ನು ಕಾಗದದ ಮತಪತ್ರ ವ್ಯವಸ್ಥೆಗೆ ಮರಳುವ ಪ್ರತಿಗಾಮಿ ಹೆಜ್ಜೆ ಎಂದು ತಿರಸ್ಕರಿಸಿತು. ಎಲ್ಲಾ ಮತದಾರರ ಚೀಟಿಗಳನ್ನು ಎಣಿಸಲು ಕೌಶಲ್ಯಯುತ ಮಾನವ ಸಂಪನ್ಮೂಲ ಮತ್ತು ಸಮಯ ಅಗತ್ಯವಾಗಿದೆ. ಮಾನವನ ಎಣಿಕೆಯಿಂದ ದೋಷ ಮತ್ತು ಕಿಡಿಗೇಡಿತನಕ್ಕೆ ಕಾರಣವಾಗಬಹುದು. ವಿವಿಪ್ಯಾಟ್ ಚೀಟಿಗಳ ಮಾನವ ಎಣಿಕೆ ಕಾಗದದ ಮತಪತ್ರಕ್ಕಿಂತ ಕೆಟ್ಟದ್ದು ಮತ್ತು ಫಲಿತಾಂಶದ ತಿರುಚುವಿಕೆಗೂ ಕಾರಣವಾಗಬಹುದು. ಅಲ್ಲದೇ ಇವಿಎಂಗಳ ತಿರುಚುವಿಕೆಯನ್ನು ಅರ್ಜಿದಾರರು ಪ್ರಶ್ನಿಸಿಲ್ಲ ಮತ್ತು 100% ವಿವಿಪ್ಯಾಟ್ ಪರಿಶೀಲನೆಯ ಬೇಡಿಕೆಯನ್ನು ಯಾರೂ ಪ್ರಶ್ನಿಸಿಲ್ಲ. ಇದು ಅಸ್ಪಷ್ಟ ಪಿಎಲ್ಐ ಆಗಿದೆ.
ಅವಧಿ ವಿಸ್ತರಣೆ:
2023-24ನೇ ಸಾಲಿನ “ಕೃಷಿ ಪ್ರಶಸ್ತಿ” ಕಾರ್ಯಕ್ರಮದಡಿ ಮುಂಗಾರು ಹಂಗಾಮಿನ ಬೆಳೆ ಸ್ಫರ್ಧೆಗೆ ಆಸಕ್ತ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿಗಳನ್ನು ಅಹ್ವಾನಿಸಲಾಗಿತ್ತು. ಅರ್ಜಿಗಳನ್ನು ಸಲ್ಲಿಸಲು 31ನೇ ಆಗಸ್ಟ್ 2023 ಎಂದು ಪ್ರಕಟಿಸಲಾಗಿದ್ದು, ಸದರಿ ದಿನಾಂಕವನ್ನು 15ನೇ ಸೆಪ್ಟಂಬರ್ 2023ರವರೆಗೆ ವಿಸ್ತರಿಸಲಾಗಿದೆ.
ಬೆಳೆ ಸ್ಫರ್ಧೆಗಾಗಿ ಎಲ್ಲಾ ಮಟ್ಟಗಳಿಗೂ (ರಾಜ್ಯ/ಜಿಲ್ಲಾ/ತಾಲ್ಲೂಕು ಮಟ್ಟದ ಕೃಷಿ ಪ್ರಶಸ್ತಿಗೆ) ಅನ್ವಯಿಸುವಂತೆ ನಿಗದಿತ ನಮೂನೆಯಲ್ಲಿ ಒಂದೇ ಅರ್ಜಿಯನ್ನು ಸಲ್ಲಿಸಬೇಕು.
ಸ್ಫರ್ಧಿಸಬಹುದಾದ ಬೆಳೆಗಳ ವಿವರಗಳು, ಅರ್ಜಿ ನಮೂನೆ, ಪ್ರವೇಶ ಶುಲ್ಕ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರ ಅಥವಾ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.