Saturday, December 14, 2024
Homeರಾಜ್ಯಬೆಂಗಳೂರು ವಿಭಾಗವಿತ್ರ ಶಿವಲಿಂಗ ನಿಮಗೆ ಅಲಂಕಾರಿಕ ವಸ್ತುವೇ: ಕೇಂದ್ರ ಸರ್ಕಾರದ ವಿರುದ್ಧ ಎಎಪಿ ಆಕ್ರೋಷ

ವಿತ್ರ ಶಿವಲಿಂಗ ನಿಮಗೆ ಅಲಂಕಾರಿಕ ವಸ್ತುವೇ: ಕೇಂದ್ರ ಸರ್ಕಾರದ ವಿರುದ್ಧ ಎಎಪಿ ಆಕ್ರೋಷ

ಬೆಂಗಳೂರು: ಹಿಂದೂಗಳ ಆರಾಧ್ಯ ದೈವ ಶಿವಲಿಂಗವನ್ನು ಕಾರಂಜಿ ರೂಪದಲ್ಲಿ ಅಲಂಕಾರಿಕ ವಸ್ತವನ್ನಾಗಿ ದೆಹಲಿಯ ಬೀದಿಗಳಲ್ಲಿ ಬಳಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೋಟ್ಯಂತರ ಭಾರತೀಯರಿಗೆ ಅವಮಾನ ಮಾಡಿದೆ ಎಂದು ಆಮ್ ಆದ್ಮಿ ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಕುಶಲಾ ಸ್ವಾಮಿ ಆಕ್ರೋಷ ವ್ಯಕ್ತಪಡಿಸಿದರು. ನಗರದ ಪಕ್ಷದ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕುಶಲಾ ಸ್ವಾಮಿ ಅವರು, ” ಬಿಜೆಪಿ ಧರ್ಮವನ್ನು ದಂಧೆ ಮಾಡಿಕೊಂಡು, ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡಿಕೊಂಡು, ದ್ವೇಷದ ಬೆಳೆ ಬಿತ್ತಿ ಅದನ್ನೇ ಉಸಿರಾಡುತ್ತಿರುವ ಬಣ್ಣ ಬಯಲಾಗುತ್ತಿದೆ. ಕೋಟ್ಯಾನು ಕೋಟಿ ಭಾರತೀಯರು ಭಕ್ತಿಯಿಂದ ಪೂಜಿಸುವ ಶಿವಲಿಂಗಗಳಿಗೆ ಬಿಜೆಪಿ ಮತ್ತದರ ಸೇವಕ ಲೆಫ್ಟಿನೆಂಟ್ ಗವರ್ನರ್ ಅವಮಾನ ಮಾಡಿದ್ದಾರೆ. ಬಿಜೆಪಿ ಶಿವ ದ್ವೇಷಿಯಾಗಿದೆ ” ಎಂದರು. ದೆಹಲಿಯ ಧೌಲಾ ಕೌನ್‌ನಲ್ಲಿ ಜಿ-20 ಶೃಂಗಸಭೆಯ ಹಿನ್ನೆಲೆಯಲ್ಲಿ ಶಿವಲಿಂಗದ ಆಕಾರದ ಕಾರಂಜಿಗಳನ್ನು ಅಳವಡಿಸಿದ್ದಾರೆ. ಶಿವಲಿಂಗವನ್ನು ಪೂಜಿಸುವ ವೀರಶೈವ ಲಿಂಗಾಯತ ಸಮುದಾಯಕ್ಕೆ, ಶಿವಲಿಂಗವನ್ನು ಗೌರವಿಸುವ ಸಮಸ್ತ ಹಿಂದೂಗಳಿಗೆ ತೋರಿದ ಅಗೌರವವಿದು. ಸದಾ ಹಿಂದೂಗಳ ಪರ ಎಂದು ತೋರ್ಪಡಿಸಿಕೊಳ್ಳುವ ನರೇಂದ್ರ ಮೋದಿ ಅವರೇ ಶಿವಲಿಂಗಗಳಿಗೆ ಅವಮಾನ ಮಾಡಿದ್ದಾರೆ ಎಂದರು.

ಬಿಜೆಪಿಯ ನಾಯಕರು ಇಂತಹ ಅವಮಾನಕರ ಫೋಟೊ, ವಿಡಿಯೋಗಳನ್ನು ನಾಚಿಕೆಯಿಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡುತ್ತಿದ್ದಾರೆ. ಇದು ಖಂಡನಾರ್ಹ. ಹಿಂದೂಗಳ ಪವಿತ್ರ ಸಂಕೇತವಾದ ಶಿವಲಿಂಗವನ್ನು ಅವಮಾನಿಸುವುದನ್ನು ಯಾವುದೇ ಕಾರಣಕ್ಕೂ ಸಹಿಸುವಿದಿಲ್ಲ. ತಕ್ಷಣ ಕೇಂದ್ರ ಸರ್ಕಾರ ತನ್ನ ತಪ್ಪನ್ನು ತಿದ್ದಿಕೊಂಡು ಶಿವಲಿಂಗ ಆಕಾರದ ಅಲಂಕಾರಿಕ ಕಾರಂಜಿಗಳನ್ನು ತೆರವುಗೊಳಿಸಬೇಕು. ಸಮಸ್ತ ಭಾರತೀಯ ಕ್ಷಮೆ ಕೇಳಬೇಕು. ದೇಶದ ಕ್ಷಮೆಯನ್ನು ಕೇಳಿ, ಶಿವಲಿಂಗಗಳನ್ನು ಸೂಕ್ತ ಗೌರವದ ಜೊತೆಗೆ ಸೂಕ್ತ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಬೇಕು ” ಎಂದು ಆಗ್ರಹಿಸಿದರು. ‘ ಚಂದ್ರಯಾನ-3 ಯಶಸ್ಸಿನ ಬಳಿಕ ವಿಕ್ರಮ್‌ ಲ್ಯಾಂಡರ್‌ ಇಳಿದ ಜಾಗಕ್ಕೆ ಶಿವಶಕ್ತಿ ಎಂದು ಹೆಸರಿಟ್ಟು ಹಿಂದೂ ಪರ ಎಂದು ಬಿಂಬಿಸಿಕೊಂಡಿದ್ದರು. ಆದರೆ ಅದೇ ಶಿವನನ್ನು ಅಲಂಕಾರಿಕ ವಸ್ತುವಾಗಿ ದೆಹಲಿಯ ಬೀದಿಗಳಲ್ಲಿ ಅಳವಡಿಸುವ ಮೂಲಕ ತಮ್ಮ ನೈಜ ಮನಸ್ಥಿತಿಯನ್ನು ತೋರಿಸಿಕೊಂಡಿದ್ದಾರೆ. ವಾಸ್ತವದಲ್ಲಿ ಬಿಜೆಪಿ ಹಿಂದೂ ವರಧಯಾಗಿದೆ. ಹಿಂದುತ್ವ, ಹಿಂದೂ ದೇವರನ್ನು ಬಿಜೆಪಿ ಕೇವಲ ಮತ ಸೆಳೆಯುವುದಕ್ಕಾಗಿ ಬಳಕೆ ಮಾಡುತ್ತದೆ’ ಎಂದು ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಟೀಕಿಸಿದರು. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿರುವುದರಿಂದ ಜಗತ್ತಿನ ಹಲವು ರಾಷ್ಟ್ರಗಳ ನಾಯಕರು ಪಾಲ್ಗೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ ದೆಹಲಿಯನ್ನು ಹಲವು ರೀತಿಯಲ್ಲಿ ಸಿಂಗರಿಸಲಾಗುತ್ತಿದೆ. ಶಿವಲಿಂಗವನ್ನು ಹೋಲುವ ಕಾರಂಜಿಗಳನ್ನು ಅಲಂಕಾರಿಕವಾಗಿ ಬಳಸಲಾಗಿದೆ. ಶಿವಲಿಂಗವು ಎಂದಿಗೂ ಶುಭ ಭಕ್ತರುಗಳ ಆಧ್ಯಾತ್ಮಿಕ ಹಾಗೂ ದೈವಿಕವೇ ಹೊರತು ಆಡಂಬರಿಕವಾಗಿ ತೋರ್ಪಡಿಸಿಕೊಳ್ಳುವಂತಹ ವಸ್ತುವಲ್ಲ ಎಂದು ಅಭಿಪ್ರಾಯಪಟ್ಟರು. ಇದೇ ವಿಚಾರವಾಗಿ ದೆಹಲಿಯ ಲೆಫ್ಟಿನೆಂಟ್ ಗೌರ್ನರ್ ವಿನಯ್ ಕುಮಾರ್ ಸಕ್ಸೆನಾ ಕಲ್ಲುಗಳಿಗೆ ಪೂಜೆ ಮಾಡುವ ಭಾರತೀಯರು ಎಂದು ಮಾತನಾಡಿದ್ದನ್ನು ಜಗದೀಶ್ ವಿ. ಸದಂ ಕಟು ಮಾತುಗಳಿಂದ ಟೀಕಿಸಿದರು.

ಬೆಂಗಳೂರು ಮಾಧ್ಯಮ ಸಂಚಾಲಕ ಅನಿಲ್ ನಾಚಪ್ಪ ಸುದ್ದಿಗೋಷ್ಠಿಯಲ್ಲಿ… ಉಪಸ್ಥಿತರಿದ್ದರು. ವಂದನೆಗಳೊಂದಿಗೆ

ಜಗದೀಶ್ ವಿ. ಸದಂ

ರಾಜ್ಯ ಮಾಧ್ಯಮ ಸಂಚಾಲಕರು